ಆನ್ಲೈನ್ ಶಿಕ್ಷಣ

ಗುರು ಬ್ರಹ್ಮ.. ಗುರು ವಿಷ್ಣು.. ಗುರು ದೇವೋ, ಮಹೇಶ್ವರಃ..

ಗುರು ಸಾಕ್ಷಾತ್ ಪರಬ್ರಹ್ಮ.. ತಸ್ಮೈ ಶ್ರೀ ಗುರುವೇ ನಮಃ..

”ಗುರು ಸೃಷ್ಟಿಕರ್ತ ಬ್ರಹ್ಮನಂತೆ, ರಕ್ಷಕ ವಿಷ್ಣುವಿನಂತೆ, ಹಾಗೂ ಮಹೇಶ್ವರನಂತೆ. ಈ ಪ್ರತ್ಯಕ್ಷ ಗುರುವಿಗೆ ನನ್ನ ವಂದನೆ” ಎಂದು ಸಾರುವ ಶ್ಲೋಕ ಇದು.

ಮನೆಯೇ ಮೊದಲ ಪಾಠಶಾಲೆ.. ತಾಯಿಯೇ ಮೊದಲ ಗುರು...

ಹುಟ್ಟಿದ ಮಗುವಿಗೆ ತಾಯಿಯೇ ಮೊದಲ ಗುರು. ಮನೆಯೇ ಮೊದಲ ಪಾಠಶಾಲೆ. ಮಗುವಿಗೆ ಜೀವನದ ಮೌಲ್ಯಗಳು, ನೈತಿಕತೆಯ ಪಾಠ, ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ, ತಿದ್ದಿ ತಿಳಿಹೇಳುವವಳೇ ತಾಯಿ. ವಿದ್ಯೆಯನ್ನು ಧಾರೆಯೆರೆಯುವ ಗುರುವೇ ಮಕ್ಕಳ ಪಾಲಿಗೆ ಬೆಳಕು.

ಸಂಸ್ಕೃತದಲ್ಲಿ ಗುರು ಎಂದರೆ ಅಜ್ಞಾನವನ್ನು ಓಡಿಸುವವ ಎಂದರ್ಥ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂದು ನಂಬಿರುವ ಸಂಸ್ಕೃತಿ ನಮ್ಮದು. ಪ್ರತೀ ಮಗುವಿಗೂ ಅಮ್ಮನಿಂದ ಪ್ರೀತಿಯ ಪಾಠ ಹಾಗು ಅಪ್ಪನಿಂದ ನೀತಿಯ ಪಾಠ ಹುಟ್ಟಿದ ಕ್ಷಣದಿಂದಲೇ ಆರಂಭವಾಗುತ್ತದೆ. ಒಂದು ಮಗುವಿನ ಭವಿಷ್ಯ ರೂಪಿಸಲು ಅನೇಕ ಗುರುಗಳು ತಮ್ಮ ಜೀವನವನ್ನು ಮುಡಿಪಾಗಿ ಇಡುತ್ತಾರೆ. ಅಂಥಹ ನಿಸ್ವಾರ್ಥ ಸೇವೆಯ ಮೂಲಕ ಕಲ್ಲನ್ನು ಶಿಲೆಯನ್ನಾಗಿ ಮಾಡಿದಂತೆ ದೇಶದ ಉಜ್ವಲ ನಾಯಕನನ್ನಾಗಿ ಮಾಡುತ್ತಾರೆ..

ಹೇಗೆ ಪ್ರತಿ ಮಗುವೂ ದೇಶದ ಭವಿಷ್ಯಕ್ಕೆ ಮುಖ್ಯವೋ, ದೇಶದ ಭವಿಷ್ಯವೂ ಮಗುವಿಗೆ ಅಷ್ಟೇ ಮುಖ್ಯ. ಹೇಗೆ ಒಂದು ಮಗುವಿಗೆ ತಂದೆ-ತಾಯಿಯರ ಜೊತೆ ಇತರ ಗುರುಗಳ ಅವಶ್ಯಕತೆಯಿದೆಯೋ, ದೇಶಕ್ಕೋ ಕೂಡ. ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಹಲವಾರು ಮಹಾನ್ ಪುರುಷರು / ಸ್ತ್ರೀಯರು ದೇಶಕ್ಕಾಗಿಯೇ ತಮ್ಮ ನಿಸ್ವಾರ್ಥ ಸೇವೆಯಿಂದ ಮಾರ್ಗದರ್ಶನ ಮಾಡಿದ್ದಾರೆ. ಆದರೆ ಭಾರತವೆಂಬ ಅತ್ಯದ್ಭುತ ಮಹಾನ್ ದೇಶಕ್ಕೆ ತಂದೆ ಅಥವಾ ತಾಯಿಯ ಸ್ಥಾನದಲ್ಲಿ ನಿಂತು ದಾರಿ ತೊರಿಸಿದವರು ಕೆಲವರು ಮಾತ್ರ.

ಈ 2020 ವರ್ಷ ಖುಷಿಯಿಂದ ಶುರುವಾಗಿರುವಾಗಲೇ ಕೊರೊನ ಮಾರ್ಚ್ ತಿಂಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಗ್ರಹಣದಂತೆ ಬಂದು ಅಂಟಿಕೊಂಡಿತು. ಆ ಕೊರೊನ ಎಂಬ ಮಹಾಮಾರಿಯು ಬಂದು ಪ್ರತೀ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯ ತೊಂದರೆಯನ್ನುಂಟುಮಾಡಿ ಅದೆಷ್ಟೋ ಜನರ ಅನ್ನವನ್ನು ಕಿತ್ತು, ಪ್ರಾಣವನ್ನು ಬಲಿತೆಗೆದು, ಹೆತ್ತವರನ್ನು ದೂರಮಾಡಿ, ಕೊನೆಗಾಲದಲ್ಲಿ ಮುಖವನ್ನೇ ನೋಡದೆ ನೋವಲ್ಲೇ ಮನೆಮಾಡಿ ಮನದ ಆಕ್ರಂಧನ ಕೇಳುವಂತೆ ಮಾಡಿತು.

ಹೀಗೆಯೇ ಈ ಕೊರೊನ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತವನ್ನುಂಟು ಮಾಡಿದೆ... ಅದೆಷ್ಟೋ ಮಕ್ಕಳ ಶಿಕ್ಷಣಕ್ಕೆ ಅಡ್ಡಗೋಡೆಯನ್ನುಂಟುಮಾಡಿ ಕಲಿಕೆಯ ಆಸಕ್ತಿಯನ್ನು ದೂರವಾಗಿಸಿ ಮಕ್ಕಳ ಬಾಳನ್ನು ಗುರಿಯಿಲ್ಲದ ಬಾಣದಂತೆ ಮಾಡಿಹೋಗುತ್ತಿದೆ..

ಶಿಕ್ಷಣ ಕ್ಷೇತ್ರಕ್ಕೆ ಬಳಸಿದ ವ್ಯಯಿಸಿದ ಶ್ರಮ ಮತ್ತು ಧನದ ಪರಿಣಾಮ ಪ್ರಕಟಕ್ಕೆ ಬರುವುದು ಭವಿಷ್ಯದಲ್ಲಿ ಮಾತ್ರ ಎಂದು, ಈ ಭವಿಷ್ಯ ಭದ್ರವಾಗಿರಬೇಕು ಎಂದರೆ ವರ್ತಮಾನದ ಶ್ರಮದ ಮೇಲೆಯೇ ಮಕ್ಕಳ ಭವಿಷ್ಯ ನಿಂತಿದೆ ಎಂದು ಹೇಳಬಹುದು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬರದೆಂದು ಸರ್ಕಾರವು ವಿವಿಧ ವಿಧಾನಗಳನ್ನು ಹೊರಹೊಮ್ಮಿ ಆನ್ಲೈನ್ ಶಿಕ್ಷಣಕ್ಕೆ ಒತ್ತು ಕೊಡುತ್ತಿದೆ. ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಬೌತಿಕವಾಗಿ ಹೇಳುವ ಪಾಠಗಳೇ ಸರಿಯಾಗಿ ಅರ್ಥವಾಗುದಿಲ್ಲ ಇದರ ಮದ್ಯೆ ಈ ಆನ್ಲೈನ್ ತರಗತಿಗಳು ಹೇಗೆ ಅರ್ಥವಾಗುತ್ತದೋ ಆ ದೇವರಿಗೆನೇ ಗೊತ್ತು. ಆಮ್ಮನ ಹೇಳಿಕೊಡುವ ಪಾಠ ಹಾಗೂ ಶಿಕ್ಷಕರ ಪಾಠಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ವಿದ್ಯಾರ್ಥಿಗಳಿಗೆ ಅರ್ಥೈಸುವ ಹಾಗೂ ಅವರನ್ನು ಪಾಠದೆಡೆಗೆ ಸೆಳೆಯುವ ಸಾಮರ್ಥ್ಯ ಇರುವುದು ಆ ಗುರುವಿಗೊಬ್ಬನಿಗೆ ಹೊರತು ಪೋಷಕರಿಗಲ್ಲ.

ಅದೆಷ್ಟೋ ವಿದ್ಯಾರ್ಥಿಗಳು ತಮಗೆ ಅಟೆನ್ಡೆನ್ಸ್ ಸಿಗಬೇಕೆಂದು ಬೆಡ್ನಲ್ಲಿ ಮಲ್ಕೊಂಡೇ ಶಿಕ್ಷಕರು ಕಲಿಸಿದ ಲಿಂಕ್ ಓಪನ್ ಮಾಡಿಕೊಂಡು ಮಲಾಗುವವರು ಇದ್ದರೆ, ಇನ್ನು ಕೆಲವರು ಯಾವುದೋ ಭಂಗಿಯಲ್ಲಿ ಇದ್ದುಕೊಂಡು ಕ್ಯಾಮೆರಾ ಓಪನ್ ಮಾಡಿಕೊಂಡು ಶಿಕ್ಷರಿಗೆ ಮುಜುಗರವನ್ನುಂಟುಮಾಡುತ್ತಾರೆ.

ಸಣ್ಣ ಮಕ್ಕಳಿಗೆ ಇಂದು ಈ ಟಿವಿ ಪಾಠ, ರೇಡಿಯೋ ಪಾಠ, ಆನ್ಲೈನ್ ಪಾಠ ಬಂದು ಏನೋ ಅರ್ಥವಾಗದೆ ಶಿಸ್ತಿನ ಅರಿವೇ ಇಲ್ಲದೆ, ಅ, ಆ ಅಕ್ಷರ, ಕನ್ನಡ ಮಗ್ಗಿ, ಸಂಕಲನ, ವ್ಯವಕಲನ, ಗುಣಕಾರ, ಭಾಗಕಾರದ ಗಣಿತ ಪಾಠಗಳು, A, B, C, D ಆಂಗ್ಲ ಅಕ್ಷರಗಳನ್ನು ಕೈ ಹಿಡಿದು ನಡೆಸಲು ಶಾಲೆಯಲ್ಲಿ ಕೈ ಹಿಡಿದು ಹೇಳುವಂತೆ ಟೀಚರ್ಗಳಿಲ್ಲ..

ಮಕ್ಕಳು ಶಾಲೆ ಮುಖ ನೋಡಿ ಸುಮಾರು ಒಂದು ವರ್ಷ ಮೇಲಾಯ್ತು ಅಂತ ಕಾಣುತ್ತದೆ. ಕೆಲವರು ಅವರ ಶಾಲೆಯ ಹೆಸರು ಮರೆತೊ ಹೋದರೆ ಅಚ್ಚರಿಯಿಲ್ಲ.. ಆದರೆ ಈ ಶಿಕ್ಷಣ ನಮ್ಮ ವಿದ್ಯಾರ್ಥಿಗಳ ಭವಿಷ್ಯದ ಉನ್ನತಿಗೆ ಒಂದು ಅಡ್ಡ ಕಲ್ಲಂತಾಗಿದೆ.. ಶ್ರೀಮಂತರ ಬಳಿ ಈ ಆಧುನಿಕ ಗ್ಯಾಡ್ಜೆಟ್ ಇದೆ ಆದರೆ ಈ ನಮ್ಮ ಊರಿನಲ್ಲಿರುವ ಬಡ ಮಕ್ಕಳ ಹೆತ್ತವರಲ್ಲಿ ಶಿಕ್ಷಣದ ಬಗ್ಗೆ ABCD ಗೊತ್ತಿಲ್ಲ.. ಪಾಠ ಕೇಳಲು ಇಂಟರ್ನೆಟ್ ಇಲ್ಲ. ಮೊಬೈಲ್ ಗ್ಯಾಡ್ಜೆಟ್ ಮೊದಲೇ ಇಲ್ಲ. ಅದೆಷ್ಟೋ ಹೆತ್ತವರ ಕನಸಿಗೆ ಈ ಕೊರೊನ ಬಂದು ತಣ್ಣೀರು ಎರಚಿ ಹೋಗಿದೆ.

ಮಕ್ಕಳ ಆಸೆ, ಅವರ ವೈಶಿಷ್ಟ್ಯ, ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣ ಮಾಡುವ ವೇದಿಕೆಯೇ ಕಳೆದುಹೀಗಿವೆ. ಶಿಸ್ತಿನ ಸಿಪಾಯಿಗಳಂತೆ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇಂದು ಮೊಬೈಲ್ನಲ್ಲಿ ಪಾಠ ಕೇಳುವಂತಾಗಿದೆ, ಶಿಕ್ಷಕ-ವಿದ್ಯಾರ್ಥಿಗಳ ಭಾಂಧವ್ಯ ಕಳೆದುಹೋಗುತ್ತಿದೆ, ಈ ಇಂಟರ್ನೆಟ್ ಜಗತ್ತಿನಲ್ಲಿ ಸೋಷಿಯಲ್ ಮೀಡಿಯದ ಮದ್ಯೆ ಈ ಪ್ರೆಂಡ್ಶಿಪ್ ಬೆಳೆಯುತ್ತಿದೆ, ಆದರೆ ಆ ಸ್ನೇಹದ ಬೆಲೆಯನ್ನು ಅವರು ತಿಳಿಯದೆ ಮೋಜು ಮಸ್ತಿ, ಈ ಇಂಟರ್ನೆಟ್ ಗೇಮ್ಸ್ಗಳಲ್ಲಿ ಮುಳುಗಿಕೊಂಡು ಅದೇ ಒಂದು ದೊಡ್ಡ ಸಾದನೆಯಂತೆ ಮಾಡಿಕೊಂಡಿದ್ದಾರೆ.. ಇಡೀ ಮನುಕುಲವನ್ನೇ ಬುಡಮೇಲು ಮಾಡಿ ಸಾಗುತ್ತಿದೆ. ಮನೆ ಮನೆಗಳಲ್ಲೂ ಮಕ್ಕಳಿಗೆ ಕಷ್ಟದ ಪರಿಯನ್ನು ತೋರಿಸಲು ದಾರಿಯಾಯಿತು. ಈ ಆನ್ ಲೈನ್ ಎನ್ನುವ ತೆರೆದ ಪ್ರಪಂಚದಲ್ಲಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಕೆಲಸ ಪೋಷಕರದ್ದಾಗಿದೆ. ಕೆಲವು ಜಾಹೀರಾತುಗಳು ಹಾಗೂ ಸೈಟ್ಗಳು ವಯಸ್ಸಿಗೆ ಮೀರಿದ ವಿಷಯಗಳನ್ನು ಸಾಮಾಜಿಕವಾಗಿ ತೋರಿಸಿ ಮಕ್ಕಳ ಆಸಕ್ತಿಯನ್ನು ಬದಲಾಯಿಸುತ್ತವೆ ಕೆಲವು ಮಕ್ಕಳು ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಹುಡುಕುವ ಆಸಕ್ತಿಗೆ ನೀರೆರೆಚಿ ಮಕ್ಕಳ ಭವಿಷ್ಯವನ್ನೇ ಹಾಳುಮಾಡಲು ಕಾರಣವಾಗುತ್ತವೆ. ಇವೆಲ್ಲವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಮಕ್ಕಳನ್ನೊಂದು ಉತ್ತಮವಾದ ಗಮ್ಯ ಸ್ಥಾನಕ್ಕೆ ಕೊಂಡೊಯ್ಯ ಬೇಕಾದ ಪೋಷಕರು ಅದೆಷ್ಟೋ ಜಂಜಾಟಗಳಿಂದ ಜರ್ಜರಿತಳಾಗುವ ಹಂತಕ್ಕೆ ಬಂದಿದ್ದಾಳೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಒಂದು ಕಡೆಯಿಂದ ನೋಡಿದರೆ ಈ ಕೊರೊನ ಶಿಕ್ಷಣದ ಮೇಲೆ ಕೆಟ್ಟ ಪ್ರಭಾವದ ನಡುವೆ ವಿದ್ಯಾರ್ಥಿಗಳಿಗೆ ಹೊಸ ಹೊಸ ತಂತ್ರಜ್ಞಾನ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ತಮ್ಮ ಜೀವನದಲ್ಲಿ ಬೇಗನೆ ಕಲಿತುಕೊಳ್ಳುವಂತೆ ಮಾಡಿತು. ಯಾರೂ ಊಹಿಸಿರಲಿಕ್ಕಿಲ್ಲ ಈ zoom ಅಥವಾ meet app ಗಳಿಂದ ವಿದ್ಯಾರ್ಥಿಗಳು ಪಾಠ ಕಲಿಯಬಹುದೆಂದು. ಆದರೆ ಇಂದು ವಿದ್ಯಾರ್ಥಿಗಳ ಪಾಠ, ಪರೀಕ್ಷೆ, ಸ್ನೇಹ, ಪ್ರೀತಿ ಎಲ್ಲಾ ಈ ಸಾಮಾಜಿಕ ತಾಣಗಳು ಹಾಗು app ಗಳಿಂದ ನಡೆಯುತ್ತಿವೆ. ಈ ಆನ್ಲೈನ್ ಶಿಕ್ಷಣ ಮಕ್ಕಳ ಓದಿನಲ್ಲಿ ಬಹಳ ರೀತಿಯಲ್ಲಿ ಬಡಲಾವಣೆಗಳನ್ನೂ ತಂದು ವಿದ್ಯಾರ್ಥಿಗಳ ಹೊಸತನದ ಹುಡುಕಾಟಕ್ಕೆ ಬುನಾದಿಹಾಕಿತು. ಹೊಸ ಹೊಸ ಬಗೆಯನ್ನು ಈ ಅಂತರ್ಜಾಲದಲ್ಲಿ ಹುಡುಕಿ ಅತಿ ಸಣ್ಣ ಸಮಯದಲ್ಲಿ ಹುಡುಕುವ ಸಾಮರ್ಥ್ಯ ಬೆಳೆಸಲು ಕಾರಣವಾಯಿತು ಎಂದರೆ ತಪ್ಪೇನಿಲ್ಲ.

ಆದರೆ ಈ ಜಗತ್ತನ್ನೇ ಬದಲಾಯಿಸುತ್ತಾ ಜನರ ಕಣ್ಣೀರನ್ನು ಹಿಂಡುತ್ತಾ ಮುಂದೆ ಸಾಗುತ್ತಿದೆ ಈ ಕರೋಣ. ಖುಷಿಯಿಂದ ಬಣ್ಣ ಬಣ್ಣದ ಬಟ್ಟೆ ಧರಿಸಿ ಹೋಗುತ್ತಿದ್ದವರು ಮನೆಯಲ್ಲಿ ನಾಲ್ಕು ಗೋಡೆಯ ಮದ್ಯೆ ಕೂರುವಂತಾಗಿದೆ. ಊಟ ವಾಸತಿಯಿಲ್ಲದೆ ಸಾಯುವಂತಾಗಿದೆ. ಸರಕಾರ ಅದೆಷ್ಟೋ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡರೂ ಈ ಜನರು ತಮಗಿಷ್ಟವಾದ ಹಾಗೆ ಊರೆಲ್ಲ ಸುತ್ತಿ, ಯಾವ ನೀತಿ ನಿಯಮವನ್ನು ಪಾಲಿಸದೆ ಕೊನೆಗೆ ಈ ಭಯಾನಕ ಮಾರಿಗೆ ತಲೆಬಾಗಿ ತಮ್ಮನ್ನೇ ಬಳಿಕೊಡುತ್ತಿದ್ದಾರೆ ಅವರ ಜೊತೆ ಜೊತೆಗಿದ್ದವರನ್ನೂ ಕರೆದುಕೊಂಡು ಹೋಗುತ್ತಿದ್ದಾರೆ.

ಈ ಕೊರೊನ ಆದಷ್ಟು ಬೇಗ ಜಗತ್ತನ್ನು ತೊರೆದು ಶಿಕ್ಷಣ ಕ್ಷೇತ್ರದ ಜೊತೆಗೆ ಎಲ್ಲಾ ಬಗೆಯಲ್ಲೂ ಹೊಸತನವನ್ನು ಸರಿಯಾಗಿ ಉಪಯೋಗಿಸಿ ಸರ್ವರ ಬೆಳವಣಿಗೆಗೆ ಕಾರಣವಾಗಲಿ ಎಂದು ಹಾರೈಸುವ ನಿಮ್ಮವ,

✍️hpnayak